ಅಸೈನ್ಮೆಂಟ್ 10. ಕೋವಿಡ್ 19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆ ಬಗ್ಗೆ ಸಲಹೆ ಹಾಗೂ ಕಾರ್ಯತಂತ್ರಗಳು.
ಅಸಜೆನ್ಮೆಂಟ್ 10
ಸೋಂಕು ಹರಡುತಿರುವ ವಿಷಮ ಕಾಲದಲ್ಲಿ ಶಿಕ್ಷಕರ ಶೈಕ್ಷಣಿಕ ಸಲಹೆ ಸೂಚನೆಗಳು.
ಅರವಿಂದ ಹುಡ್ಗಿಕರ್.
ಸ. ಕಿ. ಪ್ರಾ. ಬೆಳಕೇರ.ಬಡಾವಣೆ.
ಕಳೆದ ಕೆಲವು ತಿಂಗಳುಗಳಿಂದ ಇಡೀ ವಿಶ್ವವ್ಯಾಪಿಯಾಗಿ ಹರಡಿರುವ ಈ ನೋವಿಡ್ ಕರೊನವೆಂಬ ವೈರಸ್ ಅಥವಾ ಸೋಂಕಿನಿಂದ, ಇಡೀ ಭೂಮಂಡಲದ ಎಲ್ಲ ಮನುಷ್ಯ ಪರಂಪರೆ ಅಥವಾ ಮಾನವ ಕುಲ ಭೀಕರ ಹೆದರಿಕೆಯಲ್ಲಿ ತನ್ನ ಅಸ್ತಿತ್ವದ ಉಳಿವಿಗಾಗಿ ಜನ ಸಂಪರ್ಕವಿಲ್ಲದೆ ಗೃಹ ಬಂಧನದಲ್ಲಿ ಇರಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈ ಒಂದು ಪರಿಸ್ಥಿತಿಯ ಕರಿ ನೆರಳಿನಲ್ಲಿ ಮಾನವರ ಎಲ್ಲ ಸಾಮಾಜಿಕ ಚಟುವಟುಕೆಗಳು ಹಾಗೂ ಆತನ ಸಾಮಾಜಿಕ ಚಲನೆ ಮುರಿದುಬಿದ್ದು ಜಡತ್ವದ ಆವಸ್ಥೆ ಎಲ್ಲೆಲ್ಲೂ ವಕ್ಕರಿಸಿ ಎಲ್ಲ ವಲಯದ ಪ್ರಗತಿಯನ್ನು ಮುಗಿಸಿ ಬಿಡುತ್ತಿದೆ.
ಈ ಕೋವಿಡ್ 19 ಸಬಂದ ಸರ್ಕಾರದ ಎಲ್ಲ ಅಂಗಸಂಸ್ಥೆಗಳಲ್ಲಿ ಯಾವದೇ ರೀತಿಯ ಚಲನೆವಿಲ್ಲದೆ ಅಕ್ಷರಶಃ ವಿನಾಶದ ಹಾದಿಯಲ್ಲಿ ತಮ್ಮ ಪ್ರಯಾಣವನ್ನು ಬೆಳೆಸುತಲಿವೆ. ಇಂತಹ ಒಂದು ವಿಷಮ ದುರಿತ ಕಾಲದಲ್ಲಿ ನಮ್ಮ ರಾಜ್ಯ ಸರ್ಕಾರ ಇನ್ನಿಲ್ಲದ ಕಾರ್ಯಾತಂತ್ರಗಳ ಮೂಲಕ ಶಾಲೆ ಕಾಲೇಜುಗಳನ್ನು ತೆರೆದು ಶೈಕ್ಷಣಿಕವಾಗಿ ಕ್ರಿಯಾಶೀಲವಾಗಲು ಇನ್ನಿಲದ ಹರಸಾಹಸ ಪಡುತ್ತಿದೆ. ಈ ದಿಶೆಯಲ್ಲಿ ಹಲವಾರು ಜಿಲ್ಲೆಗಳಲ್ಲಿ ಕೆಲವು ಶಿಕ್ಷಕರು ಸ್ವಯಂ ಪ್ರೇರಿತವಾಗಿ ಸಮಾಜ ಅಥವಾ ಸಮುದಾಯದ ಮಧ್ಯದಲ್ಲಿ ವಠಾರ ಅಥವಾ ಗಲ್ಲಿಗಳಲ್ಲಿ ದೇವಸ್ಥಾನ ಅಥವಾ ಇನ್ನವದೆ ಖಾಲಿ ಸ್ಥಳಗಳಲ್ಲಿ ಪಾಠ ಮಾಡುತ್ತಿರುವದನ್ನ ಪ್ರೋತ್ಸಾಹಿಸುತ್ತಿದೆ. ಈ ಕರೊನವೆಂಬ ಮಹಾಮಾರಿಯ ಕರಿ ಛಾಯೆ ಮಕ್ಕಳ ಕಲಿಕೆಯ ನಿರಂತರತೆಗಾಗಿ ನನ್ನ ಚಿಂತನೆಗಳ ಚಿತ್ರಣಗಳು.
1- ಪ್ರಪ್ರಥಮವಾಗಿ ಭಾವನಾತ್ಮಕವಾಗಿ ಗಟ್ಟಿಯಾಗಿ ಆತ್ಮವಿಶ್ವಾಸದಿಂದ ಇರುವದು. ಧೈರ್ಯದಿಂದ ಯಾವದೇ ಪರಿಸ್ಥಿತಿ ಎದುರಿಸುವದು ಮಕ್ಕಳ ಪಾಲಕ ಪೋಷಕರು ಖುದ್ದಾಗಿ ಕಲಿತು ಮಕ್ಕಳಲ್ಲಿ ಈ ಗುಣಗಳನ್ನು ಬೇಕೇಸಬೇಕು.
2- ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿಯೊಂದು ಸಲಹೆ - ಸೂಚನೆ ಹಾಗೂ ಮಾರ್ಗದರ್ಶನಗಳನ್ನು ಅಚ್ಚುಕಟ್ಟಾಗಿ ಪಾಲಿಸುವದು.
3- ವೈಯಕ್ತಿಕ ಸ್ವಚ್ಛತೆ ಹಾಗೂ ಶಿಸ್ತುಗಳನ್ನು ಪ್ರತಿಯೊಬ್ಬ ಪಾಲಕರು ಕಲಿತು ಮಕ್ಕಳಲ್ಲಿ ಅದರ ಬಗ್ಗೆ ಜಾಗ್ರತಿ ಮೂಡಿಸುವದು.
4- ಕರೊನ ಸಂಬಂದಿ ಎಲ್ಲ ಮುಂಜಾಗ್ರತೆಯ ಕ್ರಮಗಳಿಗೆ ಒತ್ತು ಕೊಡುವದು. ಮಕ್ಕಳಿಗೆ ಸಾಧ್ಯವಾದಷ್ಟು ಬಿಸಿ ನೀರು, ಬಿಸಿ ಕಾಫಿ, ಹಾಗೂ ಉಪ್ಪು ನೀರಿನಿಂದ ಗಂಟಲು ಮುಕ್ಕಳಿಸುವ ಹವ್ಯಾಸ ಬೆಳೆಸಬೇಕು.
5- ಸರ್ಕಾರ ಪ್ರಸಾರ ಮಾಡುತ್ತಿರುವ ಶಾಲಾ ಶೈಕ್ಷಣಿಕ ವಿಡಿಯೋಗಳನ್ನ ಟಿವಿಯಲ್ಲಿ ನೋಡಲು ವ್ಯವಸ್ಥೆ ಕಲ್ಪಿಸಿಕೊಡಬೇಕು.
6- ಸಕಾಲಕ್ಕೆ ಅವರ ತರಗತಿ ಕೋಣೆಯ ಆಯಾ ಶಿಕ್ಷಕರ ಫೋನಗಳಿಗೆ ಕರೆ ಮಾಡಿ ಪಠ್ಯದ ಅಭ್ಯಾಸಗಳನ್ನ ಮಕ್ಕಳಿಗೆ ತಿಳಿಸಿಕೊಡುವಂತೆ ಕೇಳಿಕೊಳ್ಳಬೇಕು.
7- ತಮ್ಮ ಮನೆಯಲ್ಲಿರುವ ಇತರೇ ದೊಡ್ಡ ತರಗತಿಯೇ ಮಕ್ಕಳು ತಮಗಿಂತ ಕಿರಿಯರಿಗೆ ಶೈಕ್ಷಣಿಕವಾಗಿ ನೆರವಾಗಲು ತಾಕೀತು ಮಾಡಬೇಕು. ಹಾಗೂ ಹಿರಿಯರು ಸ್ವಂತ ಅಧ್ಯಯನದಲ್ಲಿ ತೊಡಗುವಂತಹ ವಾತಾವರಣವನ್ನು ಮನೆಯಲ್ಲಿ ಸ್ರಷ್ಟಿಸಬೇಕು.
8- ಶೈಕ್ಷಣಿಕ ವಾತವರಣದೊಂದಿಗೆ ಮನೆಯ ಪರಿಸರ ಲವಲವಿಕೆಯಿಂದ ಇಟ್ಟಿಕೊಳ್ಳುವದು. ಅಲ್ಕೋಹಾಲ ಆಧಾರಿತ ದ್ರಾವಣ ಸೈನಿತೈಜರ್ ನಿಂದ ಕೈಗಳನ್ನು ಶುಭ್ರಗೊಳಿಸುತ್ತ ಇರಬೇಕು. ಸಾಬೂನು ಮತ್ತು ಶುದ್ಧ ನೀರಿನಿಂದ ಕೈ ಮೈ ತೊಳೆದುಕೊಳ್ಳಬೇಕು.
9- ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳ ಕಾರ್ಯಸೂಚಿಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಸೂಚಿಗಳಿಗೆ ಸಮುದಾಯ ಹಾಗೂ ಪಾಲಕರು ಜವಾಬ್ದಾರಿಯುತವಾಗಿ ಮುಕ್ತವಾಗಿ ಪ್ರತಿಸ್ಪಂದಿಸಬೇಕು.
10. ಶೈಕ್ಷಣಿಕ ಮಾನಸಿಕತೆಯಿಂದ ಮಾತ್ರ ವೈಜ್ಞಾನಿಕವಾಗಿ ಚಿಂತಿಸಲು ಹಾಗೂ ಜೀವಿಸಲು ಸಾಧ್ಯವಾಗುವದು. ಕಾರಣ ಇಂತಹ ದುರಿತ ಕಾಲದಲ್ಲಿ ಆದಷ್ಟು ವೈಚಾರಿಕ ಸಾಹಿತ್ಯಗಳನ್ನ ಓಡುವದರಲ್ಲಿ ಪಾಲಕರು ಹಾಗೂ ಸಮುದಾಯ ಅಥವಾ ಸಮಾಜ ಜಾಸ್ತಿ ಆಸಕ್ತಿ ತಾಳಬೇಕು.
11- ಶಿಕ್ಷಣ ಇಲಾಖೆಗಳ ಅಧಿಕಾರಿಗಳ ಸಲಹೆ ಹಾಗೂ ಸೂಚನೆಗಿಳಿಗೆ, ಶಿಕ್ಷಕ ವರ್ಗ ಸಕಾರಾತ್ಮಕವಾಗಿ ವರ್ತಿಸಬೇಕು. ಕೋವಿಡ್ ಸಂಬಂದ ಅಲ್ಲಲಿ ವಠಾರ ಶಾಲೆ ಅನ್ನೋ ಮಾದರಿ ವ್ಯವಸ್ಥೆಯ ಕುರಿತ ಅದರ ಸಾಧಕ ಭಾದಕಗಳನ್ನ ಪ್ರಾಮಾಣಿಕವಾಗಿ ಧೈರ್ಯದಿಂದ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು.
12. ಆದಷ್ಟು ಮಗುವನ್ನು ಶಾಲೆಯಿಂದ ಅಥವಾ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳೋವದು ಇಡೀ ವ್ಯವಸ್ಥೆ ಹಾಗೂ ಸಮಾಜದ ಗುರುತರ ಜವಾಬ್ದಾರಿ.