ಅಸೈನ್ಮೆಂಟ್ 3 - ವರ್ಕ್ ಫ್ರಾಮ್ ಹೋಮ್. ವಿದ್ಯಾರ್ಥಿ ಪಾಲಕರ ಜೊತೆ ಜೊತೆಗೆ ಫೋನ್ ಸಂಭಾಷಣೆ..
ಇಂದು ದಿನಾಂಕ 18-07-2020 ರಂದು ನಮ್ಮ ಶಾಲೆಯ ಮೂರು ವಿದ್ಯಾರ್ಥಿಗಳಾದ ಸಿದ್ದಲಿಂಗ ಪಂಡಿತ್, ರೋಹನ್ ದತ್ತು, ಹಾಗೂ ಸವಿತಾ ಗುಂಡಪ್ಪಇವರುಗಳ ಜೊತೆಗೇ ಮಾತನಾಡಲಾಯಿತು. ಇವರ ಆರೋಗ್ಯವನ್ನು ವಿಚಾರಿಸಿ ಸದರಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನಾಲ್ಕು ಲೈನ್ ಕಾಪಿಗಳಲ್ಲಿ ಇಂಗ್ಲಿಷ್ ಸುದ್ಧ ಬರಹ ಬರೆಯಲು ಸೂಚಿಸಿದೆ.
-----------------------------------------------------------------ಇಂದು ದಿನಾಂಕ 21-07-2020ರಂದು ನಮ್ಮ ಶಾಲೆಯ ನಾಲ್ಕನೇ ತರಗತಿಯೇ ವಿದ್ಯಾರ್ಥಿನಿ ಅಭಿಲಾಷ ತಂದೆ ಮೋಹನ್ ಇವರಿಗೆ ಕರೆಮಾಡಲಾಗಿತ್ತು. ಇವರ ತಂದೆ ಶ್ರೀ ಮೋಹನ್ ರವರು ಫೋನ್ ಕಾಲ್ ರಿಸೀವ್ ಮಾಡಿ ಮಾತನಾಡಿದರು. ಇಲ್ಲಿ ಇವರು ಮೊದಲಿಗ ಕೋವಿಡ್ 19 ಸಾಂಕ್ರಾಮಿಕ ಬಗ್ಗೆ ಮಾತನಾಡುತ್ತ ಶಾಲಾ ಪ್ರಾರಂಭದ ಬಗ್ಗೆ ಕೇಳಿದರು. ನಾನು ಇವರಿಗೆ ಮೊದಲಿಗೆ ಕರೊನ ಸಾಂಕ್ರಾಮಿಕ ಬಗ್ಗೆ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ಸುರಕ್ಷತೆಯ ಬಗ್ಗೆ ಮನವರಿಕೆ ಮಾಡಿದೆನು.ಅವರ ಮಗಳಾದ ನಾಲ್ಕನೇ ತರಗತಿಯೇ ಬಾಲಕಿ ಅಭಿಲಾಷ ಇವಳಿಗೆ ಮನೆಯಲ್ಲಿ ಓದಿಸುವಲ್ಲಿ ಇವರ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿ ಯಾವದೇ ರೀತಿಯೇ ಶೈಕ್ಷಣಿಕ ಸಹಾಯಕ್ಕೆ ನಾನು ಯಾವಾಗಲು ಲಭ್ಯವೆಂದು ತಿಳಿಸಿದೇನು.
-------------------------------------------------------------------
ಮತ್ತೆ ಕೆಲ ನಿಮಿಷಗಳ ನಂತರ ಅದೇ ನಾಲ್ಕನೆಯ ತರಗತಿಯ ವಿದ್ಯಾರ್ಥಿನಿ ಕಾಮಾಕ್ಷಿ ಇವರ ತಂದೆಯಾದ ಶಿವಯ್ಯ ಇವರಿಗೆ ಫೋನ್ ಕಾಲ್ ಮಾಡಿದೆ. ಈ ಕಡೆ ನಾನು ನಿಮ್ಮ ಗ್ರಾಮದ ಶಾಲಾ ಶಿಕ್ಷಕ ಮಾತನಾಡುತಿರುವದು ಎನ್ನುವದನ್ನು ಕೇಳಿದ ತಕ್ಷಣ ಶಿವಯ್ಯನವರು ಸರ್ ಶಾಲೆಗಳು ಯಾವಾಗ ಪ್ರಾರಂಭವೆಂದು? ಕೇಳಿದರು. ನಾನು ಸರ್ಕಾರ ಈ ದಿಶೆಯಲ್ಲಿ ಚಿಂತನೆ ನಡೆಸುತ್ತಿದ್ದೆ ಆದಷ್ಟು ಬೇಗ ಒಂದು ನಿರ್ಧಾರಕ್ಕೆ ಬರುತ್ತೆ ಎಂದು ತಿಳಿಸಿದೆ. ಅಂಡ್ ಶಿವಯ್ಯ ನವರಿಗೆ ಆರೋಗ್ಯ ಸುರಕ್ಷತೆಯ ಬಗ್ಗೆ ತಿಳಿಸಿ ಕೋವಿಡ್ 19 ಸಾಂಕ್ರಾಮಿಕದ ಲಕ್ಷಣ ಹಾಗೂ ಸುರಕ್ಷೆ ತೆಯ ಬಗ್ಗೆ ತಿಳಿಸಿ ಅವರ ಮಗಳು ಕಾಮಾಕ್ಷಿಗೆ ಮಾತನಾಡಿ ಅವಳ ಇಂಗ್ಲಿಷ್ ಪಠ್ಯಪುಸ್ತಕದಿಂದ ಇಂಗ್ಲಿಷ್ ಪದಗಳನ್ನು ಬೇರೆ ಕಡೆಗೆ ಬರೆದು ದಿಕ್ಸ್ನರಿ ಬಳಸಿ ಅವುಗಳ ಅರ್ಥವನ್ನು ಬರೆಯಲು ತಿಳಿಸಿದೆ.
-------------------------------------------------------------------
ಕೊನೆಯದಾಗಿ ಮತ್ತೆ ಐದನೇ ತರಗತಿಯ ವಿದ್ಯಾರ್ಥಿಯಾದ ಕನಕದಾಸ ಶರಣಪ್ಪ ಇವನಿಗೆ ಮಾತನಾಡಲು ಕರೆಮಾಡಿದಾಗ ಇವರ ತಾಯಿ ಕಾಲ್ ರಿಸೀವ್ ಮಾಡಿದರು. ಈ ಕಡೆ ನಾನು ಶಾಲೆ ಶಿಕ್ಷಕ ಅಂದೆ ಅವರು ಕೂಡ ಸರ್ ಶಾಲೆ ಯಾವಾಗ I8ಪ್ರಾರಂಭವೆಂದು ಉದ್ಘಾರಾ ತೆಗೆದರು. ಅವರಿಗೂ ಅಷ್ಟೇ ಈ ಸಂಕ್ರಾಮಿಕದ ಲಕ್ಷಣ ಸುರಕ್ಷೆ ತಿಳಿಸಿದೆ ಹಾಗೂ ಅವರ ಮಗನಿಗೆ ಇಂಗ್ಲೀಷನ ಮೊದಲ ಪಾಠ ಬರೆಯಲು ತಿಳಿಸಿದೆ.
ಅರವಿಂದ ಹುಡ್ಗಿಕರ್.
ಸಹ ಶಿಕ್ಷಕ. ಸರ್ಕಾರಿ ಕಿರಿಯ ಪ್ರಾಥಮಿಕ
ಶಾಲೆ ಬೆಳಖೇರ ಬಡಾವಣೆ.
-----------------------------------------------------------------
ಇಂದು ದಿನಾಂಕ 23-07-2020 ರಂದು ನಮ್ಮ ಶಾಲೆಯ 4ನೇ ತರಗತಿಯ ಹುಡಗಿ ಈಶ್ವರಿ ರಾಜಶೇಖರ ಇವರಿಗೆ ಫೋನ್ ಕಾಲ್ ಮಾಡಿದ್ದೆ. ಇವರ ತಂದೆ ಕಾಲ್ ರಿಸೀವ್ ಮಾಡಿದರು. ಮೊದಲು ಅವರ ಮತ್ತು ಅವರ ಸಂಪೂರ್ಣ ಮನೆಯವರ ಆರೋಗ್ಯ ವಿಚಾರಿಸಿದೆ ಅವರು ಸಹ ನನ್ನ ಆರೋಗ್ಯ ಕುರಿತು ವಿಚಾರಿಸಿದರು. ಕೋವಿಡ್ ಕುರಿತು ಆತಂಕ ವ್ಯಕ್ತಪಡಿಸಿದರು. ನಾನು ಅದರ ಬಗ್ಗೆ ಭಯ ಪಡಬೇಕಾಗಿಲ್ಲ ನಾವು ದೈಹಿಕ ಅಂತರ ಕಾಪಾಡಿಕೊಂಡು ಶಿಸ್ತು ಸ್ವಚ್ಛತೆ ಕಾಪಾದಿದ್ದರೆ ಏನು ಆಗಲ್ಲ ಎಂದು ತಿಳಿಸಿದ್ದೆ. ಅಂಡ್ ಅವರ ಮಗಳಿಗೆ ಇಂಗ್ಲಿಷ್ ಪಠ್ಯವನ್ನು ಓದಲು ಹಾಗೂ ಪಾಲಕರು ಓಡಿಸಲು ತಿಳಿಸಿದೆ.
ಮತ್ತೆ ಅದೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಅಂಕುಶ ವೈಜಿನಾಥ ಜೊತೆಗೆ ಮಾತನಾಡಿ ಮಾಸ್ಕ ಧರಿಸಲು ಹಾಗೂ ದೈಹಿಕ ಅಂತರ ಬಗ್ಗೆ ತಿಳಿಸಿದ್ದೆ. ಇಲ್ಲಿ ನಾನು ಶಾಲೆ ಬೇಗನೆ ಸ್ಟಾರ್ಟ್ ಆಗುತ್ತೆ ಚಿಂತೆ ಬೇಡ ಅರೋಗ್ಯ ಕಡೆ ಗಮನ ಕೊಡಿ ಎಂದು ಸಲಹೆ ನೀಡಿದ್ದೆ.
ಇಂದು ದಿನಾಂಕ 24-07-2020ರಂದು ನಮ್ಮ ಶಾಲೆಯ ಮೂರನೇ ಮತ್ತು ನಾಲ್ಕನೇ ಮಕ್ಕಳ್ಳು ಡೇವಿಡ್ ದಿನೇಶ್ಕುಮಾರ, ಕಾವ್ಯ ರಾಜಶೇಖರ, ಪ್ರಜ್ವಲ್ ಓಂಕಾರ ಇವರುಗಳ ಜೊತೆ ಮಾತನಾಡಿದೆ. ಸದರಿ ಮಕ್ಕಳಿಗೆ ಇಂಗ್ಲಿಷ್ ಪಠ್ಯದ Opposite words
And fiive sentence ಬರೆಯಲು ಸೂಚಿಸಲಾಯಿತು.
-------------------------------------------------------------------
ಇಂದು ದಿನಾಂಕ 25-07-2020 ರಂದು ನಮ್ಮ ಶಾಲೆಯ ಮೂರನೇ ಮತ್ತು ನಾಲ್ಕನೇ ತರಗತಿಯ ಮೂರು ವಿದ್ಯಾರ್ಥಿಗಳಾದ ದರಚನ ವೀರಕುಮಾರ್. ರೂಪ ರಾಜಪ್ಪ ಹಾಗೂ ಅವಿನಾಶ್ ಚೇಂದ್ರಶೇಖರ್ ಇವರುಗಳ ಜೊತೆಗೆ ಮಾತನಾಡಿದೆ. ಕ್ರಮವಾಗಿ ಈ ಮೂರು ವಿದ್ಯಾರ್ಥಿಗಳನ್ನು ಸ್ವಚ್ಛತೆ ಹಾಗೂ ಸೂಕ್ಷಮತೆಗಳ ಬಗ್ಗೆ ತಿಳಿಸಿ
ಮೂವರಿಗೂ 15 ಇಂಗ್ಲಿಷ್ ಮತ್ತು 15 ಕನ್ನಡ ಶಬ್ದಗಳನ್ನು ಬರೆಯಲು ತಿಳಿಸಿ ಬಾಯಿ ಪಾಠ ಮಾಡಲು ಸೂಚಿಸಿದೆ.
------------------------------------------------------------------ಇಂದು ದಿನಾಂಕ 26-07-2020 ರಂದು ನಮ್ಮ ಶಾಲೆಯ ನಾಲ್ಕನೇ ಹಾಗೂ ಐದನೇ ತರಗತಿಯ 3 ಮಕ್ಕಳಾದ ತುಕರಾಮ ತಂದೆ ರಾಜು ಸೇವಂತಿ ರಾಜು. ಮತ್ತು ಭಾಗ್ಯವಂತ್ ಸಂಜೂಕುಮಾರ್. ಇವರುಗಳ ಜೊತೆಗೆ ಮಾತನಾಡಿ ಅವರಿಗೇ ಕ್ರಮವಾಗಿ ಇಂಗ್ಲೀಷ್ ಹಾಗೂ ಕನ್ನಡದ 10 ಪದಗಳನ್ನು ಬರೆದು ಬಾಯಿಪಾಠ ಮಾಡಿ ನೆನಪಿನಲ್ಲಿ ಇಟ್ಟಿಕೊಳ್ಳಲು ತಿಳಿಸಲಾಯಿತು.
-------------------------------------------------------------------
ಇಂದು ದಿನಾಂಕ 27-07-2020 ರಂದು ನಮ್ಮ ಶಾಲೆಯ ನಾಲ್ಕನೆಯ ಮತ್ತು ಐದನೇ ತರಗತಿಯ ಮೂವರು ಮಕ್ಕಳ ಜೊತೆ ಮಾತನಾಡಲಾಯಿತು.
ಅವರ ಹೆಸರುಗಳು. ಲಕ್ಷ್ಮಿ ಮಹಾನಂದಯ್ಯ, ತುಕರಾಮ ರಾಜು ಹಾಗೂ ಭಾಗ್ಯವಂತ್ ಇವರುಗಳ ಜೊತೆಗೆ ಮಾತನಾಡಿ ಈ ಮೂರು ಮಕ್ಕಳಿಗೆ ಅವರ ಆರೋಗ್ಯ ಕುರಿತು ವಿಚಾರಿಸಿದೆ. ಮಾಸ್ಕ ಮತ್ತು ದೈಹಿಕ ಅಂತರ ಕಾಪಾಡುವ ಬಗ್ಗೆ ಕೇಳಿದೆ. ಸ್ವಚ್ಛತೆ ಶಿಸ್ತು ಮತ್ತು ಜಾಗ್ರತಿ ವಹಿಸಲು ಸೂಚಿಸಿ ಕೆಳಗಿನ ಶೈಕ್ಷಣಿಕ ಚಟುವಟಿಕೆ ನೀಡಿದೆ.ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡದ ಮೊದಲನೆಯ ಪದ್ದ್ಯಾ ಕನ್ನಡಮ್ಮ ಹರಕೆ ಓದಲು ಮತ್ತು ಜ್ನ್ಯಾಪಕದಲ್ಲಿಟ್ಟುಕೊಳ್ಳಲು ಹೇಳಿದೆ..
------------------------------------------------------------------
ಇಂದು ದಿನಾಂಕ 28 -07-2020 ರಂದು ನಮ್ಮ ಶಾಲೆಯ ಮೂವರು ವಿದ್ಯಾರ್ಥಿಗಳಾದ ಜೊತೆ ಮಾತನಾಡಲಾಯಿತು. ಸದರಿ ವಿದ್ಯಾರ್ಥಿಗಳು ಆರೋಗ್ಯದಿಂದ ಇದ್ದರೆ ಅನ್ನೋದನ್ನು ತಿಳಿಸಿದರು. ಇವರಿಗೆ ನಾನು ನಮ್ಮ ಹರಕೆ ಪದ್ಯದ ಕಠಿಣ ಪದಗಳು ಹಾಗೂ ಭಾಷಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದೆ ಹಾಗೂ ಅವುಗಳನ್ನು ಬರೆಯಲು ತಿಳಿಸಿದ್ದೆ.
-------------------------------------------------------------------