ಅಸೈನ್ಮೆಂಟ್ 09 -ವರ್ಕ್ ಫ್ರಾಮ್ ಹೋಮ್. ವೃತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಲೇಖನ.
ಅಸೈನ್ಮೆಂಟ್ 9. ವೃತಿ ನೈಪುಣ್ಯತೆ........
ಅರವಿಂದ ಹುಡ್ಗಿಕರ್.
ಸರ್ಕಾರಿ ಕಿ. ಪ್ರಾ. ಶಾಲೆ ಬೆಳಕೇರ
ಬಡಾವಣೆ..
ವೃತ್ತಿ ನೈಪುಣ್ಯತೆಯನ್ನು ಕಾಪಾಡುವದು ನಿರಂತರದ ಪ್ರವೃತ್ತಿಯಾಗಿದ್ದಾಗ ಮಾತ್ರ ವೃತ್ತಿಯ ಪಾವಿತ್ರ್ಯ ಹಾಗೂ ವೃತ್ತಿ ಸುಂದರತೆಯನ್ನು ಸಮರ್ಥವಾಗಿ ಕಾಪಾಡಿಕೊಳ್ಳಲು ಸಾಧ್ಯ. ಇಂದಿನ ಸದ್ಯದ ದಿನಗಳಲ್ಲಿ ದೇಶದ ಎಲ್ಲ ವಲಯದ ಎಲ್ಲ ವೃತಿಗಳನ್ನು ಸಮರ್ಥವಾಗಿ ಹಾಗೂ ಸಹಜವಾಗಿ ನಿಭಾಯಿಸುವಲ್ಲಿ ಸಾಕಷ್ಟು ರೀತಿಯ ಭಯಂಕರ ಅಡೆತಡೆಗಳನ್ನು ವಿಘ್ನಗಳನ್ನ ನಾವು ಎಲ್ಲೆಡೆ ಕಾಣುತೆವೆ. ಇದಕ್ಕೇ ಕಾರಣ ಇಡೀ ವಿಶ್ವಕ್ಕೆ ಅಂಟಿಕೊಂಡಿರುವ ಅತಿ ಚಿಕ್ಕ ಸೂಕ್ಷ್ಮ ವೈರಸ್ ಅದುವೇ ಕೋವಿಡ್ 19. ಹಾಗೂ ಈ ವೈರಸ್ ವ್ಯಾಪಕವಾಗಿ ಹರಡಿರುವ ಭಯ ಅದುವೇ ಸಾಂಕ್ರಾಮಿಕ ಭಯ. ಮ್ಯಾಕ್ರೋ ಮೈಕ್ರೋ ವೈರಸ್ ಭಯ.
ಎಲ್ಲ ವೃತಿಗಳು ಅದೆಷ್ಟೇ ಅಡ್ವಾನ್ಸ್ ಅಥವಾ ತಾಂತ್ರಿಕತೆಯಿಂದ ಮತ್ತು ಆಧುನಿಕ ವ್ಯವಸ್ಥೆಗಳಿಂದ ಕೂಡಿರಲಿ ಅಲ್ಲಿ ಮಾನವ ಸಂಪನ್ಮೂಲದ ಸಮರ್ಥ ಸದ್ಬಳಕೆ ಹಾಗೂ ಅವನ ದೈಹಿಕ ಶ್ರೇಮ ಮತ್ತು ಬೌದ್ಧಿಕ ಕ್ರಿಯೆಗಳ ಹಾಗೂ ಆತನ ಬುದ್ಧಿಶಕ್ತಿಯ ಕ್ರಿಯಾಶೀಲತೆಯ ಹೊರತಾಗಿ ಯಾವದೇ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ.
ನಮ್ಮ ಶಿಕ್ಷಣ ವ್ಯವಸ್ಥೆಗೂ ಸಹ 'ಮೂಲ- "ಶಿಕ್ಷಕ ಅಥವಾ ಸುಗಮಕಾರ" ಇವನ ನಿಯಮಿತ ಚಲನಶೀಲತೆಯೊಂದೇ ಇಡೀ ಶಿಕ್ಷಣ ವ್ಯವಸ್ಥೆಯ ಎಲ್ಲ ಕೊಂಡಿಗಳಲ್ಲಿ ನಿರಂತರ ಸಂಪರ್ಕ ಸಾಧಿಸಲು ಸಾಧ್ಯ.
ಇಂದು ಈ ಕೋವಿಡ್ 19 ಅನ್ನುವ ಸಾಂಕ್ರಾಮಿಕವು ತನ್ನ ಎಷ್ಟೇ ಭಯಾನಕ ಮುಖವನ್ನು ಅದರ ಕರಿ ಛಾಯೆಗಳನ್ನು ಎಲ್ಲೆಡೆ ಹರಡಿದರು ಮಾನವನ ದೈಹಿಕ ಚಲನವಲನಗಳ ಮೇಲೇ ನಿರ್ಬಂಧ ಹೇರಿದರು ಇದು " ಮಾನವನ ಬೌದ್ಧಿಕ ಆಲೋಚನೆಗಳ ಪ್ರವಾಹವನ್ನು ನಿಲ್ಲಿಸಬಲ್ಲದೇ" ಇದನ್ನ ಒಂದು ಸಲ ನಾವುಗಳು ಯೋಚನೆ ಮಾಡಬೇಕು?
Is it really does it the tiny lice a virus can effect the intellectual Strom of a human brain ??
ಇದಕ್ಕೇ ನಾವು ಇಲ್ಲ ಖಂಡಿತ ಇಲ್ಲವೆನ್ನುವ ಉತ್ತರವನ್ನು ನೀಡಬಹುದು. ಕಾರಣ ಮಾನವನ ಬೌದ್ಧಿಕ ಆಲೋಚನ ಪ್ರವಾಹ ಹಾಗೂ ಬೌದ್ಧಿಕ ಪ್ರವೃತ್ತಿ ಅತ್ಯಂತ ತಿಕ್ಷಣ ಹಾಗೂ ನಿತ್ಯ ನಿರಂತರವಾದದ್ದು. ಅದನ್ನು ಯಾರೂ ತಡೆ ಹಿಡಿಯಲು ಸಾಧ್ಯವಿಲ.ಸ್ವತಃ ಒಬ್ಬ ವ್ಯಕ್ತಿ ತನ್ನ ಮೆದುಳಿನ್ನಿಂದ ಹೊರಡುವ ಚಿಂತನೆಗಳನ್ನ ತಡೆ ಹಿಡಿಯಲು ಸಾಧ್ಯವಿಲ್ಲ.
ಮಾನವನು ತಾನೆಲ್ಲೆ ಇದ್ದರು, ಎಷ್ಟೇ ಬಂದನದಲ್ಲಿದ್ದರು, ತನ್ನ ಬೇಕು ಬೇಡಿಕೆಗಳು ಹಾಗೂ ತನ್ನ ಅತ್ಯವಶ್ಯಕವಾದ ಮೂಲಭೂತ ಬಯಕೆಗಳನ್ನು ತೀರಿಸಿ ಕೊಳ್ಳದೆ ಇರಲಾರನು.ಇದಕೆಲ್ಲ ಕಾರಣ ಆತನ ಬೌದ್ಧಿಕ ಚಿಂತನೆಗಳು ಹಾಗೂ ಆತನ ಬುದ್ಫಿಶಕ್ತಿಯ ಅನ್ವೇಷಣಾ ಪ್ರವೃತ್ತಿ. ಮಾನವನ ನಿರಂತರ ಬೌದ್ಧಿಕ ಕೃಷಿಯ ಕ್ರಾಂತಿಯಿಂದ ಹಲವಾರು ಆಧುನಿಕ ಸಂಶೋಧನೆಗಳು ಹಾಗೂ ಹೊಸ ಹೊಸ ಅನ್ವೇಷಣೆಗಳಿಂದ ಇಡೀ ವಿಶ್ವವೇ ಒಂದು ಸಣ್ಣ ಮನೆಯಂತಾಗಿದೆ. ಮಾನವ ತನಗೆ ಬೇಕಾದ ಸ್ಪಾಟ್ ಗಳಿಗೆ ಅತಿ ಕಡಿಮೆ ಸಮಯದಲ್ಲಿ ತಲುಪಬಹುದು. ಇಂದು ನಾವು ಜೀವಿಸುತ್ತಿರುವದು ತೀರ ಅಡ್ವಾನ್ಸ್ ಯುಗ. ಆದರೂ ಇಂತಹ ಅಡ್ವಾನ್ಸ್ ಯುಗಕ್ಕೆ ಈ ಕರೊನ ಎನ್ನುವ ಮಹಾಮಾರಿ ಬಲಿಷ್ಠವಾದ ಚಾಲೆಂಜ್ ಹಾಕಿರುವದು ರಹಸ್ಯ ದ ಅದ್ಭುತ್ವವೇ ಸರಿ.
ಈ ಒಂದು ಸಾರ್ವಜನಿಕ ಲಾಕ್ಡಾನ್ ಅವಧಿಯಲ್ಲಿ ನಾವು ಸಾವಿರಾರು ಯು ಟ್ಯೂಬ್ ವಿಡಿಯೋ ಹಾಗೂ ಶೈಕ್ಷಣಿಕ ಚಿತ್ರಗಳನ್ನ ನೋಡುವದರ ಮೂಲಕ ನನ್ನ ಅಕ್ಯಾಡಾಮಿಕ್ ನಾಲೆಡ್ಜ್ ನ್ನು ಹೆಚ್ಚಿಸಿಕೊಳ್ಳಬಹುದು. ಇಲಾಖೆ ವಹಿಸಿದ ವರ್ಕ್ ಫ್ರಾಮ್ ಹೋಮ್ ಎನ್ನುವ ಅಡಿಯಲ್ಲಿ ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ ವೆಬಿನಾರ ಅಥವಾ ಆನ್ಲೈನ್ ತರಬೇತಿಗಳಲ್ಲಿ ನಾವು ಶಾಲಾ ಆಡಳಿತ ಕುರಿತ ನಲಿಕಲಿ ಹಾಗೂ ಇತರೇ ಎಲ್ಲಾ ವಿಷಯಗಳ ಸಂಪದಿಕರಣ ಕುರಿತ ಕ್ಲಾಸಗಳನ್ನು ಅಟೆಂಡ್ ಮಾಡಿದ್ದೇವೆ.
ಹಲವಾರು ವಿಷಯಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಿದೆ. 4ರಿಂದ 5ದು ಹಾಗೂ ಆರರಿಂದ ಎಂಟು ಹೀಗೆ ಕ್ಲಾಸ್ವೈಜ್ ತರಗತಿಯ ಆನ್ಲೈನ್ ತರಬೇತಿಗಳಲಿ ಬಿಜಿ ಯಾಗಿರಳು ಹಾಗೂ ನಮ್ಮ ಶೈಕ್ಷಣಿಕ ಕ್ರಿಯಾಶೀಲತೆಗೆ ಹಂತ ಹಂತವಾಗಿ ನಮ್ಮ ಶಿಕ್ಷನ ಇಲಾಖೆ ನಮ್ಮನ್ನು ತೊಡಗಿಸಿಕೊಳ್ಳುತ್ತಿರುವದು ಭಾರಿ ಉತ್ತಮವಾದ ಕೆಲಸ.
ನಾನು ಕಳೆದ ಆರರಿಂದ ಎಂಟನೇ ತರಗತಿಗಳ ಕನ್ನಡ ವಿಷಯದ ಸಂಪನ್ಮೂಲ ಶಿಕ್ಷಕನಾಗಿ ಸುಮಾರು ನೂರು ಶಿಕ್ಷಕ ಬಂಧವರೊಂದಿಗೆ ಆನ್ಲೈ ನಲ್ಲಿ ಶೈಕ್ಷಣಿಕವಾಗಿ ಸಂಬೋಧಿಸಿದ್ದು, ನನ್ನಲ್ಲಿ ವಿಷಯ ನಾವು ಬೋಧಿಸುವ ವಿಷಯ ಸಂಪದಿಕರಣಕ್ಕೆ ನನ್ನ ಅನುಭವಗಳನ್ನ ಜಾಸ್ತಿ ಮಾಡಿಕೊಳ್ಳಲು ಸಹಾಯಕವಾಯಿತು. Continued....